ಗುರುಪುರ
ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ತಾಲ್ಲೂಕಿನ ಒಂದು ಗ್ರಾಮ. ಮಂಗಳೂರಿಗೆ 16ಕಿಮೀ ದೂರದಲ್ಲಿ ಈಶಾನ್ಯ ದಿಕ್ಕಿನಲ್ಲಿ ಗುರುಪುರ ನದಿಯ ದಡದಲ್ಲಿದೆ. ಕೆಳದಿ ಅರಸರ ಕಾಲದಲ್ಲಿ ಈ ಊರು ಪ್ರಾಮುಖ್ಯ ಪಡೆದಿತ್ತು. ಇಲ್ಲಿ ಅವರು ಕಟ್ಟಿಸಿದ ವೀರಶೈವ ಗುರುಮಠದಿಂದ ಈ ಊರಿಗೆ ಗುರುಪುರ ಎಂಬ ಹೆಸರು ಬಂತು. ಈಗ ಮಠ ಜೀರ್ಣಾವಸ್ಥೆಯಲ್ಲಿದ್ದರೂ ಹಳೆಯ ಕಟ್ಟಡದ ಶಿಲ್ಪಸೌಂದರ್ಯವನ್ನು ಗುರುತಿಸಬಹುದು. ಮಠದ ಆವರಣದಲ್ಲಿ ನೀಲಕಂಠ ದೇವಾಲಯವಿದೆ. ವರದರಾಜ ವೆಂಕಟರಮಣ ದೇವಾಲಯವೂ ಇಲ್ಲಿದೆ. ಪ್ರತಿವರ್ಷ ಕಾರ್ತೀಕ ಮಾಸದಲ್ಲಿ ದೀಪೋತ್ಸವ ನಡೆಯುತ್ತದೆ. ಗುರು ಮಠಕ್ಕೆ ಸಮೀಪದಲ್ಲೇ ಬಡವರಿಗೆ ಗಂಜಿ ದಾನ ಮಾಡುತ್ತಿದ್ದ ಗಂಜಿಮಠದ ಅವಶೇಷಗಳಿವೆ.				  		  (ಎಂ.ಆರ್.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ